
(ಚಿತ್ರ ಕೃಪೆ : 123RF.com)
ನೆನಪುಗಳೆ ಹಾಗೆ ಕೆಲವೊಮ್ಮೆ ಸೋನೆ ಮಳೆಯಂತೆ..
ಜಿನುಜಿನುಗಿ ಹನಿಸಿ
ಹಸಿರು ಕ್ಷಣಗಳ ನೆನಸಿ, ತಂಪೆರೆದು,
ಗರಿಗೆದರಿ ನಲಿವ ನವಿಲ೦ತಾಗಿಸುತ್ತವೆ
ನೆನಪುಗಳೆ ಹಾಗೆ ಕೆಲವೊಮ್ಮೆ ಜಡಿಮಳೆಯಂತೆ
ಬೇಡವೆಂದರೂ ಬಿಡದೆ ಸುರಿದು
ತಿಳಿಯಾದ ಕೊಳವನು ಕಲಕಿ
ಕೊಳೆಯ ರಾಡಿಯೆಬ್ಬಿಸಿಬಿಡುತ್ತವೆ.
ನೆನಪುಗಳೆ ಹಾಗೆ ಕೆಲವೊಮ್ಮೆ ಮುಂಗಾರು ಮಳೆಯಂತೆ
ಪರಿಮಾಣದಲಿ ಸುರಿದು
ಪ್ರತಿಹೆಜ್ಜೆಯನೆಚ್ಚರಿಸಿ ಪಕ್ವತೆಯೆಡೆ ನಡೆಸಿ
ನವತೆನೆಗಳ ಬೆಳೆಸಿ ಹಸನಾಗಿಸುತ್ತವೆ.
ನೆನಪುಗಳೆ ಹಾಗೆ ಅನಿಯಮಿತ ಮಳೆಯಂತೆ
ಶುಭ್ರಗೊಳಿಸಿದಂತೆಯೇ
ಕಲಕಿಯೂ ಬಿಡುತ್ತವೆ ಒಮ್ಮೊಮ್ಮೆ
ಮಳೆಸುರಿದ ನಂತರದ ಹೊಂಗಿರಣದ ಅನುಭವ ನೀಡಿ
ಹೊಸಕನಸುಗಳಿಗೆ ನಾಂದಿಯಾಗುತ್ತವೆ ಕೆಲವೊಮ್ಮೆ.
13 comments:
ಚೆಂದದ ಕವನ.ಅಭಿನಂದನೆಗಳು.
ಭಾಳ್ "ಛಂದ" ಬರದಿಯವ್ವಾ..
ನೆನಪುಗಳೇ... ಹೀಗೆ
ನವಿರಾದ ಭಾವಗಳ ಹೂ ಗೊಂಚಲು...
ಕೃಷ್ಣಮೂರ್ತಿ ಸರ್, ಪ್ರಕಾಶಣ್ಣ ನಿಮ್ಮ ಪ್ರತಿಕ್ರಿಯೆಗೆ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು.
ಚೆನ್ನಾಗಿದೆ. ಕವನ.
>> " ನೆನಪುಗಳೆ ಹಾಗೆ ಕೆಲವೊಮ್ಮೆ ಸೋನೆ ಮಳೆಯಂತೆ..
ಜಿನುಜಿನುಗಿ ಹನಿಸಿ
ಹಸಿರು ಕ್ಷಣಗಳ ನೆನಸಿ, ತಂಪೆರೆದು,
ಗರಿಗೆದರಿ ನಲಿವ ನವಿಲ೦ತಾಗಿಸುತ್ತವೆ" <<
ಸಾಲುಗಳು ತುಂಬಾ ಇಷ್ಟವಾದವು :-)
ಚೆನ್ನಾಗಿದೆ. ಕವನ.
>> " ನೆನಪುಗಳೆ ಹಾಗೆ ಕೆಲವೊಮ್ಮೆ ಸೋನೆ ಮಳೆಯಂತೆ..
ಜಿನುಜಿನುಗಿ ಹನಿಸಿ
ಹಸಿರು ಕ್ಷಣಗಳ ನೆನಸಿ, ತಂಪೆರೆದು,
ಗರಿಗೆದರಿ ನಲಿವ ನವಿಲ೦ತಾಗಿಸುತ್ತವೆ" <<
ಸಾಲುಗಳು ತುಂಬಾ ಇಷ್ಟವಾದವು :-)
ಚೇತನಾ ಚೆಂದದ ಕವಿತೆ ..............
ಈಗೀಗ ನಿಯಮಿತವಾಗಿ ಬ್ಲಾಗಿಗೆ ನಿನ್ನ ಕವನ ಬರುತ್ತಿವೆ ಖುಷಿಯಾಗುತ್ತೆ .. ನಿನ್ನ ಬರವಣಿಗೆಯ ಹಿಡಿತ ಬಿಗಿಯಾಗ್ತಿದೆ..ಚಂದದ ಸಾಲುಗಳು...ಶುಭವಾಗಲಿ.
kavite,cholo iddu.nimma blogge nanna modalane bheti.nimma anumati ilde praveshisiddakke kshame irali.
ಕವಿತೆಯಲ್ಲಿ ನೆನಪುಗಳ ಹಲವು ಮಜಲಿನ ಮೆರವಣಿಗೆ ಸುಂದರವಾಗಿ ಮೂಡಿಬಂದಿದೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
super...
ಸುಂದರ ಕವನ...ನೆನಪುಗಳೇ ಹಾಗೆ ಅಲ್ಲವೇ ? ನೆನಪುಗಳು ಮಧುರ.....ಕೆಲವೊಮ್ಮೆ ಕಹಿಯಾಗಿ ಕಾಡುವುದು ಉಂಟು..... ಚೆನ್ನಾಗಿದೆ......
ನನ್ನ ಬ್ಲಾಗ್ ಗೂ ಬನ್ನಿ ....
http://ashokkodlady.blogspot.com/
sundara kavana.abhinandanegalu.
ಚಂದದ ಸಾಲುಗಳು.
Post a Comment