ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಸಂಸಾರ ಸಮರ – ಮಡದಿಯ ಮುನಿಸು

ಛಾಯಾಚಿತ್ರ ಕೃಪೆ : ಅಂತರ್ಜಾಲ.

ಮುನಿಸು ತರವೇ ಮನದನ್ನೆ ಅಂದದಾ ಮೊಗದಲ್ಲಿ
ಕಿಡಿ ಕಾರುತಿವೆ ನಯನಗಳು ಸಿಡಿವ ಸೂರ್ಯನಂತೆ
ನಗು ಸೂಸುವಾ ಮೊಗವಿಂದು ಉಗ್ರವಾಗಿದೆಯಲ್ಲ
ಕೋಪಶಮನಗೊಳಿಸುವ ದಾರಿಯನು ಹೇಳೇ ಕಾಂತೆ .


ನನ್ನ ಬೈದು, ನೀ ನಕ್ಕು ಹಗುರವಾಗಬಹುದಾದರೆ,
ಬೈಗುಳವೂ  ಕೂಡ ಹಿತವೆನಗೆ, ನಗುತಿರು ಸುಮತಿ 
ನನ್ನ ಹಂಗಿಸಿ ನೀನು ತೃಪ್ತಿ ಪಡುವುದಾದಲ್ಲಿ
ಆ ತೃಪ್ತಿಯೂ ಸದಾ ನಿನಗಿರಲಿ ಗೆಳತಿ.

ನಿನ್ನ ಮನದಲೇ ನೆಲೆಸಿ ಆಳ ಅಳೆದಿಹೇನು ನಾನು .....
ಕಲ್ಮಷವೊಂದಿಷ್ಟಿಲ್ಲ ತಿಳಿದಿಹುದು ಎನಗೆ..
ನೀ ಹೇಳಿದಾ ಮಾತ ಕೆಳದೇ ಇದ್ದಾಗ
ಕೆಂಪೆರುವ ಮುಖದ ಕೋಪವನು ಕಂಡಿಲ್ಲವೇನು

ವಿರಸವಿಲ್ಲದಿರೆ ಸೊಗಸಿಲ್ಲ ಸುಂದರಿ
ಉಪ್ಪಿಲ್ಲದಾ ಸಾರು ಸಪ್ಪೆ ಸಪ್ಪೆ....
ಸರಸದಾ ನಡುವೆ ವಿರಸವೊಂದಿಷ್ಟಿರೆ
ಊಟದ ಜೊತೆಗಿರುವ ಉಪ್ಪಿನಕಾಯಿಯಷ್ಟೆ.

ಸಿಟ್ಟು ತಣಿಯುವ ಮೊದಲೇ
ಬಳಿ ಬರುವೆ ಅಳು ಮುಖದಿ
ಸಂತೈಸಬೇಕು ನಾನೇ ನಿನಗೆ.
ಬಯ್ದವಳು ನೀನೆ ಅಳುವವಳು ನೀನೆ.
ಮಗುವಾಗಿ ಬಿಡುವೆ ನೀನಾಗ ನನ್ನೊಡನೆ…

17 comments:

ಸಾಗರದಾಚೆಯ ಇಂಚರ April 16, 2011 at 12:04 PM  

ಎಂಥ ಕವನ,
ಸರಸ ವಿರಸ ಇದ್ದರೇನೆ ಬಾಳು ಚೆಂದ
ಬದುಕು ಸಿಟ್ಟು-ಪ್ರೀತಿಯ ಮಿಶ್ರಣ ದ ಹದ
ಒಳ್ಳೆಯ ಕವನ
ಹಾಸ್ಯದ ಜೊತೆ ತಿಳುವಳಿಕೆಯ ಅರಿವು

Ittigecement April 16, 2011 at 7:46 PM  

ವಾಹ್ !!

ದಾಂಪತ್ಯ ಗೀತೆ ಅಂದರೆ ಇದೇ ಇರಬೇಕು..

ಪ್ರತಿ ಸಾಲಿನಲ್ಲೂ ಪ್ರೀತಿ ಭಾವ ತುಂಬಿದೆ..

ಅಭಿನಂದನೆಗಳು ಚಂದದ ಕವನಕ್ಕೆ..

ಮನಸಿನಮನೆಯವನು April 16, 2011 at 7:55 PM  

Hindomme neevu nanna blogge bheti kottidri.. Aagale nimma blogannu, nanna pattiyalli serisikondu,blog veekshisalu nanu prayatnisi sotidde.. Indu baagilu teredide.

Kavana chendavide,koneya 2 saalugalu muddaagive.

ದಿನಕರ ಮೊಗೇರ April 17, 2011 at 12:20 AM  

inthaha pati sikkare ellaa hengasara baaLu savi savi...
chennaagide .......... pritiyide........

prabhamani nagaraja April 17, 2011 at 8:06 AM  

ಕವನ ಚೆನ್ನಾಗಿದೆ. ಮುನಿದ ಪತ್ನಿಯನ್ನು ಸ೦ತೈಸುವುದನ್ನು ತಿಳಿಹೇಳುವ೦ತಿದೆ! ಅಭಿನಂದನೆಗಳು.

ಚುಕ್ಕಿಚಿತ್ತಾರ April 17, 2011 at 8:08 AM  

ಸು೦ದರವಾಗಿದೆ ಕವಿತೆ..
ಸರಸ ವಿರಸಗಳೆರಡರಲ್ಲೂ ರಸವಿದೆ ದಾ೦ಪತ್ಯದಲ್ಲಿ...

ಮನಸು April 18, 2011 at 2:10 AM  

very nice kavana..

ಮನಮುಕ್ತಾ April 20, 2011 at 9:21 PM  

ತು೦ಬಾ ಚೆ೦ದದ ಮಧುರವಾದ ದಾ೦ಪತ್ಯಗೀತೆ.very nice..!

ಓ ಮನಸೇ, ನೀನೇಕೆ ಹೀಗೆ...? May 6, 2011 at 5:00 AM  

ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕೆ ಎಲ್ಲರಿಗೂ ತುಂಬಾ ಧನ್ಯವಾದಗಳು....:)

Unknown May 17, 2011 at 4:19 AM  

good poem in recent times that carried me till end not once but twice

ದೀಪಸ್ಮಿತಾ May 21, 2011 at 10:30 AM  

ಸಂಸಾರವೆಂದರೆ ಸರಸ ವಿರಸ, ಮುದ್ದು ಮಾಡುವುದು, ಜಗಳವಾಡುವುದು ಇದ್ದದ್ದೆ. ಒಂಥರಾ ಉಪ್ಪು ಹುಳಿ ಖಾರ ಸಿಹಿ ಇದ್ದರೆ ಹೇಗೆಯೋ ಹಾಗೆ. ಕಾಕತಾಳೀಯವೆಂಬಂತೆ ಈಗ ನನ್ನ ಹೆಂಡತಿಯೂ ನನ್ನ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಮಾತುಬಿಟ್ಟು ಕೂತಿದ್ದಾಳೆ

Raghu June 19, 2011 at 2:38 AM  

ಚೆನ್ನಾಗಿದೆ ನಿಮ್ಮ ಕವನ..
ಮುನಿಸು..ನಗು..ಹಿತ..ಕೋಪ..ಗೆಳತಿ..ಗೆಳೆಯ..ವಿರಸ..ಸರಸ..ಇದುವೇ ಜೀವನ..
ಒಳ್ಳೆದಾಗಲಿ...
ನಿಮ್ಮವ,
ರಾಘು.

ಜಲನಯನ July 3, 2011 at 7:33 AM  

ಚೇತು, ಸಾರಿ..ಬಹಳ ದಿನಗಳ ನಂತರ ನೋಡ್ತಿದ್ದೇನೆ...ಎರಡುಬಾರಿ ಕಾಮೆಂಟ್ ಹಾಕಿ ನನ್ನ ಜಿ-ಮೈಲ್ ತೊಂದರೆಯಿಂದ ಪಬ್ಲಿಶ್ ಆಗಲಿಲ್ಲ...
ಬಹಳ ಸುಂದರ ಓಲೈಕೆಯ ನಲ್ಲ-ನಲ್ಲೆಯರ ಸಲ್ಲಾಪ...
ನನಗೆ ಬಹಳವಾಗಿ ಹಿಡಿಸಿದ್ದು ಕಡೆಯ ಚರಣ...

KalavathiMadhusudan September 25, 2011 at 9:04 AM  

samarasave jiivana,
atyaadare amrutavu
vishavallave..? kavanada
shaili sogasaagide.abhinadanegalu.

prashasti November 13, 2011 at 10:55 AM  

ಚೆನ್ನಾಗಿದ್ದು ಕವನ:-)

Badarinath Palavalli December 7, 2011 at 3:46 AM  

ಇಂತಹ ಓಲೈಕೆಯೇ ನಡುವಿನ ಪ್ರೇಮ ಕಾರಣ. ಉತ್ತಮ ಕವನ ಮೇಡಂ.
www.badari-poems.blogspot.com

Anonymous January 24, 2012 at 5:42 AM  

super.

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com