ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಲಹರಿ

IMG_5149
ಹಲವು ಭಾವಗಳು
ಮನದ ಹಲುಬುವಿಕೆ
ಮೊಗ್ಗಿನಲೆ ಮುದುಡಿಹೋದವೆಷ್ಟೋ
ಹೂವಾಗರಳಿ ಉದುರಿದವೆಷ್ಟೋ,
ಮೊಗ್ಗು ಹೂವುಗಳಾಗಿ ಫಲ
ನೀಡಿದ ಲಹರಿಗಳೆಷ್ಟೋ,
ಎಲ್ಲವೂ ಫಲಿಸಲೇಬೇಕೆಂಬ
ನಿಯಮವೇನೂ ಇಲ್ಲ,
ಹಲಕೆಲವು ಲಹರಿಗಳು
ಆರೆಗತ್ತಲಲಿ ಕ್ಷಣ ಮಾತ್ರ
ಮಿನುಗಿ ಹೋದ ಸಣ್ಣ ಮಿಂಚಂತೇ,
ಮರುಕ್ಷಣವೇ ಅನುಮಾನ
ಮಿಂಚು ಮಿನುಗಿದ್ದು ನಿಜವಾ ಭ್ರಮೆಯಾ!!,
ಆಕಾರಲ್ಲದೆಯೇ ಮೂಡಿದ ನೆರಳಂತೆ
ಅಸ್ಪಷ್ಟವೇ ಇರಲಿ ಬೇಸರವಿಲ್ಲ
ಬಿಸಿಲು ಬೆಳಕಿನ ಹಗಲಿಗಿಂತ
ಕೆಲವೊಮ್ಮೆ....
ಮಂಜು ಮುಸುಕಿದ
ಮಬ್ಬು ಕವಿದ ಮುಂಜಾವೇ ಇಷ್ಟ.

ಕಪ್ಪು ಬಿಳುಪಷ್ಟೆ ಅಲ್ಲ
ಎಲ್ಲ ಬಣ್ಣಗಳ ಹಲವು ಸುರುಳಿಗಳು
ಹೀಗೆಯೇ ದಡ ಸೇರದ
ಆಗೀಗ ಸುಳಿದು ಹೋಗುವ
ಸಾವಿರ ಪುಟ್ಟ ಪುಟ್ಟ ಅಲೆಗಳ ಪೂರ
ಮನವೆಂಬ ಮಹಾಸಾಗರ.

8 comments:

Dr.D.T.Krishna Murthy. May 17, 2012 at 6:34 PM  

ಮನಸ್ಸಿನ ಆಳ,ಅಲ್ಲಿ ನಡೆವ ವಿದ್ಯಮಾನಗಳು,ಅದರ ವಿಸ್ತಾರ ಎಲ್ಲವನ್ನೂ ಪದಗಳಲ್ಲಿ ಹಿಡಿದಿಟ್ಟಿದ್ದೀರಿ.ಚೆಂದದ ಕವನ.ಇಷ್ಟವಾಯಿತು.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.ನಮಸ್ಕಾರ.

ಚುಕ್ಕಿಚಿತ್ತಾರ May 20, 2012 at 6:52 AM  

ಚೆಂದದ ಕವನ

ಮನದಾಳದಿಂದ............ May 22, 2012 at 9:17 PM  

ಚೇತನಾ ಮೇಡಂ,
ಚಂದದ ಕವನ, ಇಷ್ಟವಾಯ್ತು,,,,,,,,,,

prashasti May 26, 2012 at 10:00 PM  

ಚೆನ್ನಾಗಿದೆ :-)

ಪುಷ್ಪರಾಜ್ ಚೌಟ June 13, 2012 at 10:08 AM  

ನೀವು ಹೇಳಿದ್ದು ನಿಜ,
ಬಿಸಿಲು ಬೆಳಕಿನ ಹಗಲಿಗಿಂತ
ಕೆಲವೊಮ್ಮೆ....
ಮಂಜು ಮುಸುಕಿದ
ಮಬ್ಬು ಕವಿದ ಮುಂಜಾವೇ ಹಿತವೆನಿಸುತ್ತದೆ. ಹೀಗೆ ಲಹರಿಯೊಳಗೆ ತೇಲುವಾಗ!

ಸುಂದರ ಅಭಿವ್ಯಕ್ತಿ

ushodaya July 15, 2012 at 3:57 AM  

thumbaa olle kavithe.su.....per.

ಪದ್ಮಾ ಭಟ್ January 8, 2013 at 2:11 AM  

ತುಂಬಾ ಚೆನ್ನಾಗಿದೆ....

Anonymous July 13, 2014 at 10:44 PM  

whaa cool and pleasant lines...

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com