ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ನಿನ್ನ ನೆನಪು

  
ಹಸಿರೆಲೆಗಳ ನಡುವೆ ರವಿಯ ಮೊದಲ ಕಿರಣ ಜಾರಿದಾಗ
ಮುಂಜಾವ ಮಂಜಿನ ಮುತ್ತ ಹನಿ ಹೊಳೆದಾಗ
ಸೂಜಿ ಮಲ್ಲಿಗೆ ಹೂ ನಸುನಾಚಿ ನಕ್ಕಾಗ
ತಟ್ಟನೆ  ಸುಳಿಯುವುದು  ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ಸಂಜೆ ಸೂರ್ಯನು ಭಾನಲಿ ಬಣ್ಣಗಳ ಚಿತ್ತಾರ ಬರೆದಾಗ
ತಂಗಾಳಿಯ ಸುಳಿಯೊಂದು ಚಳಿಯ ಕಚಗುಳಿಯಿಟ್ಟಾಗ
ಸಂಜೆ ಮಲ್ಲಿಗೆ ಹೂ ಅರೆಬಿರಿದು ನಕ್ಕಾಗ
ಮತ್ತೆ ಮನದಿ ನುಸುಳುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ತಿಳಿನೀಲ ಆಗಸದಿ ಪೌರ್ಣಿಮೆಯ ಶಶಿ ವಿರಮಿಸಿದಾಗ
ಬೆಳ್ಳಿ ಬೆಳದಿಂಗಳಲಿ ಇಳೆಯು ವ್ಯಯ್ಯಾರದಿ ನಕ್ಕಾಗ
ರಾತ್ರಿ ರಾಣಿಯು ಅರಳಿ  ಘಮ ಘಮಿಸಿ ಮತ್ತೇರಿಸಿದಾಗ
ಚಿತ್ತವನು ಸೆಳೆಯುವುದು ನಿನ್ನ ನೆನಪು
ಮುಗುಳ್ನಗುವಾಗಿ ಮರುಕಳಿಸುವುದು ನಿನ್ನ ನೆನಪು

ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
ಆಂತರ್ಯವು ಮಿಡಿದ  ಆಲಾಪ ನಿನ್ನ ನೆನಪು
ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
ಹೃದಯದಲಿ ಮೂಡಿರುವ ಹೊಸ ಹುರುಪು ನಿನ್ನ ನೆನಪು 
ಅನುಕ್ಷಣದ ಆಹ್ಲಾದ ನಿನ್ನ ನೆನಪು ಮನದ ಹೊಸ ಉಲ್ಲಾಸ ನಿನ್ನ ನೆನಪು

ಅನುದಿನವೂ ಅಲೆಯಂತೆ ಮರಳುವುದು ನಿನ್ನ ನೆನಪು
ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು 
ನೆರಳಿನಂತಹ ಜೊತೆಗಾತಿ ನಿನ್ನ ನೆನಪು
ಹಿತವಾಗಿ ಕಾಡುತಿದೆ   ನಿನ್ನ ನೆನಪು
ಮೈಮರೆಸಿ ನಗಿಸುತಿದೆ ನಿನ್ನ ನೆನಪು

17 comments:

Ittigecement December 11, 2010 at 2:24 AM  

ಬಲು ಸುಂದರ ಸಾಲುಗಳು..!

ಅಭಿನಂದನೆಗಳು ...

ಜಲನಯನ December 11, 2010 at 4:50 AM  

ನೆನಪಿನ ನೆನಪು ಕೇವಲ ನೆನಪಾಗದೇ ಇರುವ ಹಾಗೆ ನೆನಪುಗಳ ಭಾವಗಳನ್ನು ಕದಡಿ ಕೆನೆತಂದಂತೆ...
ನನ್ನ ಏಕಾಂತದ ಸಂಭ್ರಮವು ನಿನ್ನ ನೆನಪು
ಆಂತರ್ಯವು ಮಿಡಿದ ಆಲಾಪ ನಿನ್ನ ನೆನಪು
ಕಂಗಳಲಿ ಮಿನುಗುತಿಹ ಹೊಸ ಹೊಳಪು ನಿನ್ನ ನೆನಪು
ಅನುದಿನವೂ ಆಹ್ಲಾದ ತರುವುದು ನಿನ್ನ ನೆನಪು
ಅನುಕ್ಷಣವೂ ಅಲೆಯಂತೆ ಮರಳುವುದು ನಿನ್ನ ನೆನಪು
ಅಲೆ ಅಲೆಯಾಗಿ ಸುಳಿಯೊಳಗೆ ಸೆಳೆಯುವುದು ನಿನ್ನ ನೆನಪು
ಈ ಸಾಲುಗಳ ಗಹನತೆ ಮೆಚ್ಚುಗೆಯಾಯ್ತು.......

V.R.BHAT December 12, 2010 at 6:03 AM  

Nice ! ಶುಭಾಶಯಗಳು.

ದಿನಕರ ಮೊಗೇರ December 12, 2010 at 7:44 AM  

tumbaa chennaagide madam...

LAxman December 12, 2010 at 9:08 AM  

tumbaa chennaagide

ಶಿವಪ್ರಕಾಶ್ December 19, 2010 at 8:21 PM  

ಚನ್ನಾಗಿದೆ ಅಕ್ಕ...
ಶುಭದಿನ... :)

ಮನಸು December 20, 2010 at 2:42 AM  

chennagide kavana chetu.... avatte odidde comment haakalu aagiralilla... heegi barita iri chetu...

ಸಾಗರದಾಚೆಯ ಇಂಚರ January 9, 2011 at 1:48 PM  

wonderful
sorry for late comment :)

Subrahmanya January 23, 2011 at 2:14 AM  

ನಿಮ್ಮ ಕವನದ ಸಾಲುಗಳು ಮುದನೀಡಿತು. ಭಾವಗೀತೆಯಂತೆ ರಾಗ ಹಾಕಿ ಹಾಡಬದೇನೋ !

ಮನಮುಕ್ತಾ January 28, 2011 at 5:53 AM  

ತು೦ಬಾ ಚೆ೦ದದ ಸಾಲುಗಳು..

Ittigecement February 3, 2011 at 6:40 PM  

ಚೇತನಾ...

ತುಂಬಾ ಸೊಗಸಾದ ಕವನ...

ಖುಶಿಯಾಯಿತು !

ಓ ಮನಸೇ, ನೀನೇಕೆ ಹೀಗೆ...? February 8, 2011 at 10:39 AM  

ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

prabhamani nagaraja March 26, 2011 at 7:49 AM  

ಸು೦ದರ ಸಾಲುಗಳ ಉತ್ತಮ ಕವನ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

HegdeG April 20, 2011 at 12:56 PM  

Chandada saalugalu akkayya :)

Shaker. Hasigal November 29, 2011 at 5:35 AM  

ಒಂದು ಒಳ್ಳೆಯ ಕವನದ ರಚನೆ ಮಾಡಿದ್ದಕ್ಕೆ ಅಭಿನಂದನೆಗಳು.

MAYAPPA LATTE January 31, 2015 at 4:02 PM  

9s

Sandhyarao February 5, 2017 at 8:44 PM  

Chandada saalugalu Chetana..

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com