ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಬೆಲೆಯಿದೆಯೇ ಈ ಬಾಲಕರ ಕನಸುಗಳಿಗೆ..?


ಚಿತ್ರಗಳು : ಶಶಿಧರ್ ಬಂಗೇರ.ಮುಗ್ಧ ಕಂಗಳ ತೆರೆದು
ಜಗವ ದಿಟ್ಟಿಸುತಿರುವ
ಈ ಪುಟ್ಟ ಬಾಲರಿಗೂ
ಕನಸುಗಳಿವೆಯೇ ?

ಬಾಲ್ಯವೇ ಬರಡಾಗಿರುವಾಗ
ಬೃಂದಾವನವೇಲ್ಲಿಯದು
ಚಿಕ್ಕ ಪುಟ್ಟ ಆಸೆಗಳಿಗಾದರೂ 
ಆಸರೆಯಿದೆಯೇ ?

ಆಟಿಕೆಗಳ ಆಸೆಯಲ್ಲ
ಮಹಲು ಮನೆಗಳದಲ್ಲ
ಕಾಣಿಸದೇ ಆ  ಕಂಗಳ ಆಸೆ
ತಿನ್ನೋ ಹಣ್ಣುಗಳಿಗಾಗಿ...
ಗಾಜಿನೊಳಗಿನ ಆ 
ಸಿಹಿ ತಿಂಡಿಗಳಿಗಾಗಿ...

ಚಿಂದಿ ಬಟ್ಟೆಯ ಉಟ್ಟು
ಚಳಿಗೆ ನಡುಗುವ ಬಾಲ
ಆಸೆ ಪಟ್ಟರೆ ತಪ್ಪೇ
ಬೆಚ್ಚಗಿನ ಅಂಗಿಗಾಗಿ..?
ಅಂಗಡಿಯ ಬೊಂಬೆ ತೊಟ್ಟಿರುವ
ಚೆಂದದ  ಉಡುಪಿಗಾಗಿ.

ಮುಗಿಲೆತ್ತರಕ್ಕಿಲ್ಲ..
ಈ ಮುಗ್ಧ ಬಾಲರ ಕನಸು
ಹರಡಿಕೊಂಡಿವೆ ಇಲ್ಲೇ ಅನಾಥವಾಗಿ
ಕಾರು ಬೈಕು ಬೇಕೆಂದಲ್ಲ ಈ ಮಕ್ಕಳಾ ಕೂಗು 
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..

(ಸಹ ಬ್ಲಾಗಿಗರಾದ ಶಶಿಧರ ಬಂಗೇರ (http://heegesumsumne.blogspot.com) ಅವರ ಬ್ಲಾಗ್ ನಲ್ಲಿಯ ಕೆಲವು ಮನಕಲಕುವ ಛಾಯಾಚಿತ್ರಗಳನ್ನು ನೋಡಿ ಬರೆದ ಕೆಲವು ಸಾಲುಗಳು.)

11 comments:

ಕ್ಷಣ... ಚಿಂತನೆ... bhchandru November 15, 2010 at 3:44 AM  

ಆ ಕಂಗಳುಗಳಲ್ಲಿನ ಆಸೆಯನ್ನು ಬಿಂಬಿಸಿದ್ದೀರಿ. ಚಿತ್ರ ಈ ಮಕ್ಕಳ ಕಥೆ ಹೇಳುತ್ತವೆ. ಹಾಗೆಯೇ ಅವರಲ್ಲಿರುವ ಅತ್ಯಲ್ಪ ತೃಪ್ತಿಯನ್ನೂ ಅವರ ಮುಗ್ಧನಗೆಯು ತೋರಿಸಿದೆ...

ಪ್ರಗತಿ ಹೆಗಡೆ November 15, 2010 at 4:35 AM  

ಮನಸಿಗೆ ನಾಟುವಂತಿದೆ ನಿಮ್ಮ ಕವನ...
ಚಿಂದಿ ಬಟ್ಟೆಯ ಉಟ್ಟು
ಚಳಿಗೆ ನಡುಗುವ ಬಾಲ
ಆಸೆ ಪಟ್ಟರೆ ತಪ್ಪೇ
ಬೆಚ್ಚಗಿನ ಅಂಗಿಗಾಗಿ..?
ಅಂಗಡಿಯ ಬೊಂಬೆ ತೊಟ್ಟಿರುವ
ಚೆಂದದ ಉಡುಪಿಗಾಗಿ.
ಸಾಲುಗಳು ತುಂಬಾ ಇಷ್ಟವಾದವು.. ಧನ್ಯವಾದಗಳು..

ಚಿನ್ಮಯ ಭಟ್ November 15, 2010 at 4:59 AM  

ಹೊಟ್ಟೆಗಾಗಿ ಚೂರು ಬಟ್ಟೆಗಾಗಿ....
ಗೇಣು ಈಗಿನ ಜನರಿಗೆ ಅರ್ಥವಾಗಲಿಕ್ಕಿಲ್ಲ ಅಲ್ಲವೇ?
ಇವರನ್ನು ಸಮಾಜ ಕಡೆಗಣಿಸಿದಷ್ಟೂ ,ಅವರು ಸಮಾಜವನ್ನು ಬಿಟ್ಟು ಹೋಗುತ್ತಾರೆ.!!!!!! ಅವರನ್ನು ಮೇಲೆತ್ತಿ ಬೆಳೆಸುವ ಹೊಣೆ ನಮ್ಮ ಮೇಲೆಯೇ ಇದೆ.
ಬನ್ನಿ ನಮ್ಮನೆಗೂ....
http://chinmaysbhat.blogspot.com

ಶಶೀ ಬೆಳ್ಳಾಯರು November 15, 2010 at 6:44 PM  

ಚೇತನಾ ಅವರೇ...
ನಿರ್ಗತಕ ಮಕ್ಕಳ ಬಗೆಗಿನ ನಿಮ್ಮ ಆಶಯ ನಿಜಕ್ಕೂ ಮನಮೆಚ್ಚಿತು... ಕನಸುಗಳಿಲ್ಲದ ಮಕ್ಕಳು ಎಂದು ಅವೆಷ್ಟನ್ನೋ ನಾವು ಗುರುತಿಸಬಹುದು. ಆದರೆ ಅವರ ಕಂಗಳಲ್ಲೂ ಕನಸ ಇರಬಹುದು, ಅದನ್ನು ಹೆಕ್ಕಿ ನೋಡುವ ಮನಸ್ಸು ಇರುವುದು ಬೆರಳೆಣಿಕೆಯವು ಮಾತ್ರ.
ನನ್ನ ಬ್ಲಾಗ್ ಫೊಟೋ ಬಳಸಿರುವುದು ನೋಡಿ ಸಂತಸವಾಯಿತು.
http://heegesumsumne.blogspot.com

Bhat Chandru November 15, 2010 at 8:26 PM  

ಚೇತನ ಮೇಡಮ್ ಚೆನ್ನಾಗಿದ್ದು ಕವನದ ಸಾಲು ಮತ್ತೆ ಅರ್ಥ.
In addition to that-

ಹಸಿದ ಹೊಟ್ಟೆಗೆ
ಒಂದಿಷ್ಟು ಕೂಳಿಲ್ಲ,
ಹತ್ತಿರ ಹೋದರೆ
ಕೈ ಮಾಡಿ ತಳ್ಳುವರೆಲ್ಲ.
ಮಾತಲ್ಲೇ ಮರುಗಿದರೇನು ಬಂತು?
ಕೈ ಚಾಚೋಣ ಜೊತೆ ನಿಂತು.

ಸೀತಾರಾಮ. ಕೆ. / SITARAM.K November 16, 2010 at 12:00 AM  

ಚಿತ್ರದ ಸುತ್ತಲಿನ ತಮ್ಮ ಕಲ್ಪನಾ ಹರಿವು ಅವರ ಕಷ್ಟಗಳಿಗೆ ತಾವು ಮಿಡಿದದ್ದು ಶಬ್ದವಾಗಿದೆ. ನನಗೆ ಆ ಕಷ್ಟದಲ್ಲೂ ಆ ಮಕ್ಕಳ ಮೊಗದ ಮುಗ್ದ ನಗುವಲ್ಲಿ ಸಾವಿರು ಕನಸು ಭವಿಷ್ಯತ್ತಿನಲ್ಲಿನ ನಂಬಿಕೆ ಕಂಡಿತು.

ಚುಕ್ಕಿಚಿತ್ತಾರ November 16, 2010 at 9:29 AM  

nice...

tumbaa channaagi kavanisiddeera.. manamuttuvantide.

ಓ ಮನಸೇ, ನೀನೇಕೆ ಹೀಗೆ...? November 17, 2010 at 5:09 AM  

BH ಚಂದ್ರು, ಪ್ರಗತಿ ಹೆಗಡೆ, ಚಿನ್ಮಯ್ ಭಟ್, ಶಶಿ ಬೆಳ್ಳಾರೆ, ಭಟ್ ಚಂದ್ರು, ಸೀತಾರಾಂ ಸರ್, ಚುಕ್ಕಿ ಚಿತ್ತಾರ ನಿಮ್ಮೆಲ್ಲರ ಪ್ರೋತ್ಸಾಹಭರಿತ ಪ್ರತಿಕ್ರಿಯೆಗೆ ಧನ್ಯವಾದಗಳು.

@ಚಿನ್ಮಯ್ ಭಟ್ : ನಿಜ ಚಿನ್ಮಯ್ ಅವರೇ...ಇಂಥ ನಿರ್ಗತಿಕ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರ ಮೂಲಭೂತ ಅವಶ್ಯಕತೆಗಳನ್ನಾದರೂ ಒದಗಿಸಿಕೊಡುವ ಜವಬ್ಧಾರಿ ನಮ್ಮೆಲ್ಲರ ಮೇಲೆಯೇ ಇದೆ. ಹ ಹ್ಹ ಹ್ಹ ಗೇಣು ಅನ್ನುವ ಶಬ್ಧ ಎಷ್ಟು ನೆನಪಿಸಿದರೂ ನೆನಪಾಗಲಿಲ್ಲ. ಅದಕ್ಕೆ ಅಲ್ಲಿ ಚೂರು ಅನ್ನೋ ಶಬ್ಧ ಮೂಡಿತು. ಈಗ ಆ ಪದವನ್ನ ಸೇರಿಸ್ತಿನಿ. ನೆನಪಿಸಿದ್ದಕ್ಕೆ ಧನ್ಯವಾದಗಳು.:)

@ಶಶಿ ಬೆಳ್ಳಾರೆ :ಆ ಮಕ್ಕಳಿಗೂ ಖಂಡಿತ ಕನಸುಗಳಿರಬಹುದು ಸರ್..ಆದರೆ ಕನಿಷ್ಠ ಅವಶ್ಯಕತೆಗಳಾದ ಒಳ್ಳೆಯ ಊಟ, ಬಟ್ಟೆಯೇ ಇಲ್ಲದಿರುವಾಗ ಅವರ ಮೊದಲ ಆಸೆ ಅವುಗಳ ಮೇಲೆಯೇ ಇರಬಹುದು ಅಲ್ವಾ..

@ ಭಟ್ ಚಂದ್ರು : ಹೌದು ಚಂದ್ರು ...ಈ ಕವಿತೆಗೆ ತುಂಬಾ ಅವಶ್ಯಕವಾದ ಅರ್ಥಪೂರ್ಣ ಸಾಲುಗಳನ್ನು ಸೇರಿಸಿದ್ದೀರಾ. ಚೆಂದದ ಸಾಲುಗಳಿಗೆ ಧನ್ಯವಾದಗಳು.

@ ಸೀತಾರಾಂ : ನಿಜ ಸರ್ ...ಅವರ ಕಣ್ಣುಗಳಲ್ಲಿ ಭವಿಷ್ಯದ ಭರವಸೆಯ ನಗು ಕಾಣುತ್ತೆ. ಆದರೆ ಸಧ್ಯದಲ್ಲಿ ಅವರಿಗಿರುವ ಮಕ್ಕಳಲ್ಲಿ ಅತೀ ಸಾಮಾನ್ಯವಾಗಿ ಇರಬೇಕಾದ ಆಸೆಗಳು ...ಹಣ್ಣು, ಸಿಹಿತಿಂಡಿಗಳನ್ನೆಲ್ಲ ತಿನ್ನಬೇಕು ಅನ್ನೋ ಆಸೆಗಳು ಕೂಡ ಕೆಲ ಮಕ್ಕಳಿಗೆ ಕೈಗೆಟುಕದ ಮರೀಚಿಕೆಯಾಗುತ್ತದಲ್ಲ ಅನ್ನೋ ಯೋಚನೆ ನನಗೆ ನೋವು ಕೊಡುತ್ತೇ ಸರ್. ಕೆಲವು ಸಾರಿ ನಾನು ಹಣ್ಣು ಕೊಳ್ಳುವಾಗ ಪಕ್ಕದಲ್ಲೇ ಆಸೆಯಿಂದ ನೋಡುತ್ತಿರುವ ಮಕ್ಕಳಿಗೆ ನಾನು ಖರೀದಿಸಿದ ಕೆಲ ಹಣ್ಣುಗಳನ್ನು ನೀಡಿ ಬರುತ್ತೇನೆ. ಆ ಆಸೆ ಕಣ್ಣುಗಳೆ ನೆನಪಾಗಿ ಈ ಸಾಲುಗಳು ನನ್ನಿಂದ ಮೂಡಿವೆ ಸರ್.

ವಿ.ಆರ್.ಭಟ್ November 22, 2010 at 9:27 AM  

Nice !

ಜಲನಯನ December 11, 2010 at 4:47 AM  

ಚೇತು, ವಾವ್, ನೋಡಿರ್ಲಿಲ್ಲ ಈ ಪೋಸ್ಟ್...ನನಗೆ ಈ ಪದ ಹೆಚ್ಚು ಹಿಡಿಸ್ತು...ಬಾಲ-ಕರುಗಳಿಗೆ.....ಹೌದು ಇವು ಬಾಲಕರುಗಳು...ಇವುಗಳ ಆರೈಕೆ ಪೋಷಣೆ ಸರಿಯಾಗದಿದ್ದರೆ ..ಏನೆಲ್ಲಾ ಅನರ್ಥ ಆಗಬಹುದು ಮತ್ತು ಮಕ್ಕಳ ಮನೋಭಾವ ಹೇಗಿರುತ್ತೆ ಎನ್ನುವುದು ಚನ್ನಾಗಿ ಮೂಡಿದೆ ಸಾಲುಗಳಾಗಿ...

ಆರ್.ಆರ್ ಆಶಪುರ್ September 7, 2011 at 12:35 AM  

ಚೇತನ ಮೇಡಂ ನಮಸ್ಕಾರ ನಿಮ್ಮ
ಬೆಲೆಯಿದೆಯೇ ಈ ಬಾಲಕರ ಕನಸುಗಳಿಗೆ..?
ಓದಿದೆ ಬಾಲ ಕಾರ್ಮಿಕರ ಜೀವನವನ್ನು ಮನ ಕಲಕುವಂತೆ ವಿವರಿಸಿದ್ದೀರಿ.
ಧನ್ಯವಾದಗಳು
ದಯವಿಟ್ಟು ನನ್ನ ಬ್ಲಾಗ್ ನೋಡಿ ನಿಮ್ಮ ಅನಿಸಿಕೆ ತಿಳಿಸಿ
http://rakeshashapur.blogspot.com
ವಂದನೆಗಳೊಂದಿಗೆ

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com