ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಒಲವ ಭಾವ

ನೀಲಿ ಆಗಸದಿಂದ ಸೂರ್ಯ ಜಾರುವ ಮುನ್ನ
ನನ್ನಿನಿಯನಾಗಮನ ವಾಗಲೆಂಬಾಸೆ ,
ಬಂದ ಕೂಡಲೇ ಕೂಡಿ ಕಡಲ ತೀರಕೆ ಓಡಿ
ಸಂಜೆ ಸೂರ್ಯನ ಕೆಂಪ ಸವಿಯಲೆನಗಾಸೆ ,
ಕೈಯೊಳಗೆ ಕೈ ಬೆಸೆದು ಮಂದ ಹೆಜ್ಜೆಯನಿಡುತ
ಮೌನವಾಗಿಯೇ ಜಗವ ಮರೆತುಬಿಡುವಾಸೆ,
ಸಂಜೆ ತಂಗಾಳಿ ನನ್ನವನ ಮುಂಗುರುಳ ತೀಡಿದಾಗ
ಕಣ್ಣಲ್ಲೆ ಒಲವ ಧಾರೆಯ ಹರಿಸಿಬಿಡುವಾಸೆ,
ನಯನಗಳು ಒಂದಾಗಿ ಮಂದಹಾಸವ ಬೀರೆ,
ಭಾವಗಳು ಬೆರೆತು ಲೀನವಾಗಲೆಂಬಾಸೆ,

15 comments:

ವಿ.ಆರ್.ಭಟ್ March 6, 2010 at 7:13 PM  

Good Effort !

ಮನಮುಕ್ತಾ March 6, 2010 at 10:51 PM  

ಚೆ೦ದದ ಕವನ..ಉತ್ತಮ ಅಭಿಲಾಷೆ!

ಚುಕ್ಕಿಚಿತ್ತಾರ March 7, 2010 at 5:15 AM  

ಸು೦ದರ ಕವಿತೆ...

Raghu March 7, 2010 at 8:24 AM  

ಕವನ ಚೆನ್ನಾಗಿದೆ.. ಬಾವನೆಗಳು ಮನಸ್ಸಿಗೆ ಕಡೆಗೆ ವಾಲುವ ಸಮಯ ಸೂರ್ಯ ಆಗಸದಿಂದ ಜಾರುವ ಸಮಯ..
ನಿಮ್ಮವ,
ರಾಘು.

Ranjita March 7, 2010 at 10:05 AM  

ಸೂಪರ್ ಅಕ್ಯಾ ,
ಮಸ್ತ್ ಇದ್ದು :D

ಓ ಮನಸೇ, ನೀನೇಕೆ ಹೀಗೆ...? March 8, 2010 at 2:00 AM  

ವಿ.ಆರ್. ಭಟ್, ಮನ ಮುಕ್ತಾ, ಚುಕ್ಕಿ ಚಿತ್ತಾರ , ರಘು , ರಂಜಿತ ...ನಿಮ್ಮೆಲ್ಲರ ಪ್ರೋತ್ಸಾಹಭರಿತ ಕಾಮೆಂಟ್ ಗೆ ತುಂಬಾ ಧನ್ಯವಾದಗಳು..

ಜಲನಯನ March 8, 2010 at 10:14 AM  

ಶೀರ್ಷಿಕೆಯಂತೆ...ಭಾವ ...
ಓ ಮನಸೇ ನೀನೇಕೆ ಹೀಗೆ...?
ಓಡುವೆಯಾ ಸೂರ್ಯ ಹೀಗೆ?
ಸಮುದ್ರದಲೆ ಮೈಮರೆಸಿತೇ ಹೀಗೆ?
ಇನಿಯನಮುಂಗುರುಳ ಸರಿಸುವಾ ಹಾಗೆ....
........ಸೂಪರ್ ತಂಗ್ಯವ್ವಾ..ನಿನ್ನ ಪದಬಳಕೆಯಲ್ಲಿನ ಹಿಡಿತ ಹಿಡಿಸಿತು...ಮುಂದುವರೆಯಲಿ ಕೃಷಿ....ಶುಭಂ

ಓ ಮನಸೇ, ನೀನೇಕೆ ಹೀಗೆ...? March 8, 2010 at 10:29 AM  

ತುಂಬಾ ಧನ್ಯವಾದಳು ನಿಮ್ಮ ಈ ಕಾವ್ಯತ್ಮಕ ಕಾಮೆಂಟ್ ಗೆ ಅಜಾದ ಭಯ್ಯಾ.

ಸಾಗರದಾಚೆಯ ಇಂಚರ March 10, 2010 at 12:25 AM  

ತುಂಬಾ ಸುಂದರ ಕವನ
ಅದರಲ್ಲೂ ಕೆಳಗಿನ
''ಕೈಯೊಳಗೆ ಕೈ ಬೆಸೆದು ಮಂದ ಹೆಜ್ಜೆಯನಿಡುತ
ಮೌನವಾಗಿಯೇ ಜಗವ ಮರೆತುಬಿಡುವಾಸೆ,
ಸಂಜೆ ತಂಗಾಳಿ ನನ್ನವನ ಮುಂಗುರುಳ ತೀಡಿದಾಗ
ಕಣ್ಣಲ್ಲೆ ಒಲವ ಧಾರೆಯ ಹರಿಸಿಬಿಡುವಾಸೆ,''

ಸಾಲುಗಳಂತೂ ಅತ್ಯದ್ಭುತ
ರಸಿಕತೆಗೆ ಸವಾಲೆಸೆಯುವಂತಿದೆ

ಗೌತಮ್ ಹೆಗಡೆ March 10, 2010 at 3:47 AM  

ಖುಷಿ ಕೊಡ್ತು .ನಿಜಕ್ಕೂ ಚೆನ್ನಾಗಿದೆ..:)

kuusu Muliyala March 10, 2010 at 3:56 AM  

ಬ೦ದು ಬಿಡಲೀ ನಿಮ್ಮಿನಿಯ ಚ೦ದ್ರ ಮೂಡುವ ಮುನ್ನ,
ಭಾವಗಳು ಒಲವಾಗಿ ಬೆಳಗಲೀ ನಿಮ್ಮ ಬಾಳನ್ನ.
ಕವನ ಚೆನ್ನಾಗಿದೆ.ಅಭಿನ೦ದನೆಗಳು

ಓ ಮನಸೇ, ನೀನೇಕೆ ಹೀಗೆ...? March 11, 2010 at 6:40 AM  

ಗುರು ಅವ್ರೆ...ಆ ಪ್ರೀತಿಯ ಮಾಯೆಯೇ ಹಾಗೆ ಆಲ್ವಾ ..? ಪ್ರೀತಿಸುವ, ಪ್ರೀತಿಸಲ್ಪಡುವ ಕಲ್ಪನೆಯೇ ಖುಷಿ. ನಿಮ್ಮ ಸುಂದರ ಕಾಮೆಂಟ್ ಗೆ ತುಂಬಾ ಧನ್ಯವಾದಗಳು.

ಓ ಮನಸೇ, ನೀನೇಕೆ ಹೀಗೆ...? March 11, 2010 at 6:43 AM  

ಗೌತಮ್, kuusu Muliyala ನಿಮ್ಮ ಸುಂದರ ಪ್ರೋತ್ಸಾಹಕರ ಕಾಮೆಂಟ್ ಗೆ ತುಂಬಾ ಧನ್ಯವಾದಗಳು.

PRAVEEN ಮನದಾಳದಿಂದ March 11, 2010 at 11:11 AM  

ಸುಂದರ ಕವಿತೆ. ನಿಮ್ಮಾಸೆ ಸುಂದರವಾಗಿದೆ. ಹೀಗೆ ಬರಲಿ ಇನ್ನಷ್ಟು ಬರಹಗಳು.

ಗುರು-ದೆಸೆ !! March 12, 2010 at 12:38 AM  

'ಓ ಮನಸೇ, ನೀನೇಕೆ ಹೀಗೆ...?' ಅವ್ರೆ..,

ಚೆನ್ನಾಗಿದೆ..)
"ಕಣ್ಣು ಕಣ್ಣು ಕಲೆತಾಗ....."

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com