ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಬಿಟ್ಟು ಹೋದೆಯಾ ಗೆಳೆಯಾ

ಬಿಟ್ಟು ಹೋದೆಯಾ ಗೆಳೆಯಾ ನಟ್ಟ ನಡುದಾರಿಯಲಿ
ಕತ್ತಲದು ಕವಿಯುತಿದೆ ಮನದ ತುಂಬಾ
ಮತ್ತೆ ಬೆಳಗುವುದಿಲ್ಲ ಪ್ರೇಮ ಜ್ಯೋತಿಯು ಇಲ್ಲಿ
ಆರಿಸಿದ ಕಟುಹೃದಯಿ ನೀನಾದೆಯಲ್ಲ

ಗಮ್ಯವದು ದೂರವಿದೆ, ಚೈತನ್ಯ ಅಡಗುತಿದೆ
ಹೇಗೆ ಸವೆಸಲಿ ಈ ದಾರಿಯನು  ಒಂಟಿಯಾಗಿ
ನಡುದಾರಿಯಲಿ ನಿಂತೀಗ ದಿಶೆ ತಪ್ಪಿ ಹೋಗಿದೆ.
ಪಯಣಿಸುವ ಛಲ ಕೂಡ ಕ್ಷೀಣಿಸುತಿದೆಯಲ್ಲ

ಚಂದದ ಕನಸಿನಲ್ಲಿ ಪುಟ್ಟ ಮನೆಯೊಂದಿತ್ತು
ಮುಂದೊಂದು ಹೂದೋಟ ಮೀನುಕೊಳ ಜೊತೆಗೆ.
ಪ್ರೇಮದಾ ಆ ಗೂಡಿನಲಿ ಜೋಡಿ ಹಕ್ಕಿಗಳಾಗಿ
ತನುವೆರಡು ಉಸಿರೊಂದು ಎನುವ ಹಾಡಿತ್ತು

ಆ ಪ್ರೇಮನಗರಿಯಲಿ ಪ್ರೀತಿಯಾ ಸೂರಿನಡಿ
ಹತ್ತು ಮಕ್ಕಳ ಪಡೆವ ಆಸೆ ಚೆನ್ನಿತ್ತು
ಈ ಬಾಳ ಪಯಣದ ಕೊನೆಯ ಹೆಜ್ಜೆಯವರೆಗೆ
ಜೊತೆಯಾಗೆ ನಡೆಯುವ ಭಾಷೆ ನಮದಿತ್ತು.

ಹೇಗೆ ಮರೆತೇ ಹುಡುಗಾ ನಿನ್ನದೇ ಮಾತುಗಳು
ಪ್ರತಿಧ್ವನಿಸುತಿದೆ ನನಗಿನ್ನೂ ಮನದ ತುಂಬಾ
ತ್ಯಜಿಸಿ ಹೋದರೂ ನೀನು ನನ್ನವನೆ ಎನುವ ಮನ
ಅರ್ಥ ಮಾಡಿಸುವ ಪರಿ ತಿಳಿಯದಲ್ಲ

ನೂರು ಪ್ರಶ್ನೆಗಳು ಬಂದು ಮನವನ್ನು ಕಾಡುತಿವೆ
ಉತ್ತರಿಸುವ ಇಚ್ಛೆ ನಿನಗಿಲ್ಲವಲ್ಲ
ಅಚ್ಚರಿಯಾಗುತಿದೆ........
ಈತನೆನಾ ನಾ ಮೆಚ್ಚಿ ಮನಸು ಕೊಟ್ಟಿದ್ದು ?
ಎಂದಿಗೂ ನೀನೊಂದು ಪ್ರಶ್ನೆಯಾಗಿಬಿಟ್ಟೆಯಲ್ಲ

ನೀ ಕಟ್ಟಿದರಮನೆಯ ನೀನೆ ಕೊಡವಿದೆಯಲ್ಲ
ಆ ಮನಸ್ಯಾಕೆ ಕಲ್ಲಾಯ್ತೋ ನಾನರಿಯೇ ಹುಡುಗಾ
ಕನಸ ಕಂಗಳ ತುಂಬಾ ನೋವು ತುಂಬಿದೆ ಈಗ
ಚೂರಾದ ಕನಸುಗಳು ಇರಿಯುತಿವೆಯಲ್ಲ   

  ***********************

24 comments:

ಸೀತಾರಾಮ. ಕೆ. April 28, 2010 at 10:22 AM  

ಪರಿತ್ಯಕ್ತೆಯ ಮನದಾಳವನ್ನ ತೆರೆದಿಡುವ ತಮ್ಮ ಕವನದ ಪರಿ ಚೆ೦ದವಾಗಿ ಹೊಮ್ಮಿದೆ.

Ranjita April 28, 2010 at 3:49 PM  

ತ್ಯಜಿಸಿ ಹೋದರೂ ನೀನು ನನ್ನವನೆ ಎನುವ ಮನ
ಅರ್ಥ ಮಾಡಿಸುವ ಪರಿ ತಿಳಿಯದಲ್ಲ :( ):

ಸೂಊಊಊಉಪರ್ ಕವನ ಅಕ್ಯಾ ..:)

ಸಾಗರದಾಚೆಯ ಇಂಚರ April 29, 2010 at 4:53 AM  

ವವ್
ಸುಂದರ ಕವಿತೆ
ರಾಗ ಹಾಕಿ ಹಾಡುವಂತಿದೆ
ಹೇಗೆ ಮರೆತೇ ಹುಡುಗಾ ನಿನ್ನದೇ ಮಾತುಗಳು
ಪ್ರತಿಧ್ವನಿಸುತಿದೆ ನನಗಿನ್ನೂ ಮನದ ತುಂಬಾ
ತ್ಯಜಿಸಿ ಹೋದರೂ ನೀನು ನನ್ನವನೆ ಎನುವ ಮನ
ಅರ್ಥ ಮಾಡಿಸುವ ಪರಿ ತಿಳಿಯದಲ್ಲ
ನೂರು ಪ್ರಶ್ನೆಗಳು ಬಂದು ಮನವನ್ನು ಕಾಡುತಿವೆ
ಉತ್ತರಿಸುವ ಇಚ್ಛೆ ನಿನಗಿಲ್ಲವಲ್ಲ
ಅಚ್ಚರಿಯಾಗುತಿದೆ........
ಈತನೆನಾ ನಾ ಮೆಚ್ಚಿ ಮನಸು ಕೊಟ್ಟಿದ್ದು ?
ಎಂದಿಗೂ ನೀನೊಂದು ಪ್ರಶ್ನೆಯಾಗಿಬಿಟ್ಟೆಯಲ್ಲ

ಮೇಲಿನ ಪ್ಯಾರ ವನ್ನು ಎರಡು ಪ್ಯಾರ ಮಾಡಿ ಪ್ರಾಸಬದ್ದವಾಗಿಸಿದರೆ
ಸಂಪೂರ್ಣ ಕವನ ಒಳ್ಳೆಯ ಭೋಜನವಿದ್ದಂತೆ

ಸಿಮೆಂಟು ಮರಳಿನ ಮಧ್ಯೆ April 29, 2010 at 8:17 AM  

ಓ ಮನಸೇ.. ನೀನೇಕೆ ಹೀಗೆ...?

ನೀನೇ
ಕಟ್ಟಿಕೊಟ್ಟ
ಹತ್ತಾರು..
ಕನಸದು..
ಮನದಲ್ಲಿ..
ನನ್ನ
ಚಂದ...
ಚಂದಾ..
ಅನ್ನುತ್ತಿತ್ತು..
ನೂರಾರು..
ಆಸೆಭಾವಗಳ..
ಇಟ್ಟುಕೊಂಡಿತ್ತು
ಮನಸು..
ಒಂಟೀಯಾಗಿ.
ಬಿಟ್ಟುಹೋದೆಯಲ್ಲ..
ಹೃದಯದ..
ಭಾವಗಳ
ಹೊಸಕಿ..
ಚಿಗುರು
ಚಿವುಟಿ....

ಬಹಳ ಚಂದದ ಗೀತೆ ..
ಅಭಿನಂದನೆಗಳು...

ಮನಮುಕ್ತಾ April 29, 2010 at 9:25 PM  

ಭಾವನಾತ್ಮಕ ಶಬ್ದಗಳಲ್ಲಿ ಭಾವನೆಯ ಆಳ ಚೆನ್ನಾಗಿ ಮೂಡಿಬ೦ದಿದೆ.ಸು೦ದರ ಕವಿತೆ..ಬರೆದ ರೀತಿ ಕೂಡಾ ಹಿಡಿಸಿತು.

ಜಲನಯನ April 30, 2010 at 12:13 PM  

ತಂಗಿನಾ ಏನ ಹೇಳಲಿ ನಾ ಶಬ್ದ ಸಿಗುತ್ತಿಲ್ಲ
ಪದಜೋಡಣೆಗೆ ನಿನಗೆ ನೀನೇ ಸೈಎನಿಸಿ
ನೌ ಸೀಖಿಯಾ ನೀನೆಂದು ಹೇಳಲಾಗುತ್ತಿಲ್ಲ
ಮನದ ದುಗುಡದ ಬಗ್ಗಡವ ಕಲಕಿ
ಮನಕೊಂದು ಸಾಂತ್ವನತೆ ಹುಡುಕಿರುವೆಯಲ್ಲ
ಅವನ ಮಾತೊಂದು ನೂರಾಗಿ ನಿನ್ನ
ಮನಶಾಂತಿ ಶಾಂತತೆಗೆ ಕಲ್ಲಹಾಕಿದೆಯಲ್ಲ
..............ಅತಿ..ಸರಳ..ಸಮೃದ್ಧ ಕವನ...

Deepasmitha April 30, 2010 at 11:39 PM  

ಸುಂದರ ಕವನ

ಓ ಮನಸೇ, ನೀನೇಕೆ ಹೀಗೆ...? May 1, 2010 at 12:19 PM  

ಸೀತಾರಾಮ್ ಸರ್ , ರಂಜಿತ , ಸಾಗರದಾಚೆಯ ಇಂಚರ , ಪ್ರಕಾಶಣ್ಣ, ಮನಮುಕ್ತಾ, ಆಜಾದ್ ಭಯ್ಯಾ , ದೀಪಸ್ಮಿತ ..ನಿಮ್ಮೆಲ್ಲರ ಅಮೂಲ್ಯ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
@ ಸಾಗರದಾಚೆಯ ಇಂಚರ : ಗುರು ಅವ್ರೆ ಮೊದ್ಲು ನಾನು ಆ ಪ್ಯಾರಾ ಒಂದೇ ಆಗಿರಬೇಕು ಅಂತಲೇ ಇಟ್ಟಿದ್ದರೂ ನಿಮ್ಮ ಸಲಹೆ ಕೂಡ ಸರಿ ಎನಿಸುತ್ತಿದೆ. ಈಗ ತಿದ್ದುಪಡಿ ಮಾಡ್ತಿದೀನಿ. ನಿಮ್ಮ ಸಲಹೆ ಗೆ ತುಂಬಾ ಧನ್ಯವಾದಗಳು.

Bhat Chandru May 4, 2010 at 2:04 AM  

Mast iddu kavana

ಓ ಮನಸೇ, ನೀನೇಕೆ ಹೀಗೆ...? May 4, 2010 at 6:10 AM  

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಚಂದ್ರಕಾಂತ.

!! ಜ್ಞಾನಾರ್ಪಣಾಮಸ್ತು !! May 5, 2010 at 10:51 PM  

ಓ ಮನಸೇ, ನೀನೇಕೆ ಹೀಗೆ...?,

ಭಾವನಾತ್ಮಕವಾಗಿದೆ...

Bhat Chandru May 9, 2010 at 10:05 PM  

Are you Chetana Mam?? Are you the same Chetana Mam who taught me computer. Who took English classes for us.
Who used to hit softly on our head, whenever we started playing Mario or RoadRash instead of learning word,excel.
Mam, who eventually became an elder sister for all of us. Who taught us to smile even after getting less marks in test.
Sometimes in life there really are bonds formed that can never be broken,
that can never be forgotten.
Mam, After My High school i hadn't heard anything about you. so it took time to figure you out here. I wasn't knowing that u r in abroad. That s really coool. Thank you Chetana Mam for all the knowledge you had shared with us.

ಓ ಮನಸೇ, ನೀನೇಕೆ ಹೀಗೆ...? May 11, 2010 at 6:16 AM  

@ Bhat Chandru :
you made my day Chandrakant…Thanks so much for your nice words. I am so happy to meet u here like this after so long time.
yes, those 2 yrs are golden period of my life. I forever cherish those moments I spent with u all.
I am so glad and proud to see u guys doing good in your lives. I wish u all good in whatever u delves into.. May all your dreams take a flight and reach the destination. Keep going. Shine on..!!

With lots of luv & Best Wishes

Chetanakka.

ಹೆಸರು ರಾಜೇಶ್, May 11, 2010 at 11:40 AM  

ಇದು ನಿಮ್ಮ ಬ್ಲಾಗಿನ ನನ್ನ ಮೊದಲ ಒದು. ನಿಮ್ಮ ಮೇಲೆ ನನಗೆ ನೀರೀಕ್ಷೆ ಹೆಚ್ಚಾಗಿದೆ...ಮೊದಲನೆಯದಾಗಿ ನಿಮ್ಮ ಪ್ರಯತ್ನಕ್ಕೆ, ಹಾಗೂ ಒಂದು ಒಳ್ಳೆಯ ಪುಸ್ತಕ ಪರಿಚಯ ಮಾಡಿದ್ದಕ್ಕೆ....ಎರೆಡನೆಯದು ನಿಮ್ಮ ಅನುವಾದಕ್ಕೆ...i am really very happy for this.....Keep Writing.....ಧನ್ಯವಾದಗಳು ಚೇತನ ಅವರೆ....

ಓ ಮನಸೇ, ನೀನೇಕೆ ಹೀಗೆ...? May 12, 2010 at 8:43 AM  

ಇದು ಅನುವಾದ ಅಲ್ಲ ರಾಜೇಶ್ ಅವರೇ. ಈ ಕವನ ಬರೆಯಲು ಆ ಪುಸ್ತಕ ಪ್ರೇರಣೆ ಅಷ್ಟೇ. ಕವನದಲ್ಲಿ ವ್ಯಕ್ತವಾದ ಭಾವನೆ ಆ ಕಾದಂಬರಿಯಿಂದ ಪ್ರೇರೇಪಿತಗೊಂಡಿದೆ. ಅದು ಒಳ್ಳೆ ಪುಸ್ತಕ. ಖಂಡಿತ ಅದನ್ನು ಓದಿ.

ವಾಣಿಶ್ರೀ ಭಟ್ May 18, 2010 at 8:13 PM  

tumba chennagi barediddira... nimma kalpanege hatsoff..

please visit

www.vanishrihs.blogspot.com

ಓ ಮನಸೇ, ನೀನೇಕೆ ಹೀಗೆ...? May 19, 2010 at 2:50 AM  

ಜ್ನಾನಾರ್ಪಣಮಸ್ತು, ರಾಜೇಶ್, ವಾಣಿಶ್ರೀ ..ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು

Deepasmitha May 28, 2010 at 10:04 AM  

ತುಂಬಾ ಚೆನ್ನಾಗಿದೆ ಮೇಡಮ್

Anonymous August 16, 2010 at 5:44 AM  

Superb !
Felt the pain just by reading it.

ವಸಂತ್ September 1, 2010 at 12:58 AM  

ಪ್ರೀತಿಗೆ ಬೆಲೆಕಟ್ಟಲು
ಯಾರಿಂದಲು ಸಾಧ್ಯವಿಲ್ಲ
ಸಂಬಂಧಗಳು ಬೇರೆಯಾದರೂ
ಪ್ರೀತಿಯ ಸ್ವರೂಪ ಒಂದೆ
ಇಂತಹ ಪ್ರೀತಿಯನ್ನು
ಹಿರಿಯರಿಂದ ದಕ್ಕಿಸಿಕೊಂಡ ನಿಮಗೆ
ಶತಕೋಟಿ ಧನ್ಯವಾದಗಳು.

ಮಾತೃ ದೇವೋಭವ,
ಪಿತೃ ದೇವೋಭವ,
ಅಥಿತಿ ದೇವೋಭವ,
ಆಶಾರ್ಯ ದೇವೋಭವವೆಂದು,
ಸುಮ್ಮನೆ ಅನ್ನಲು ಸಾಧ್ಯವೆ.

ವಸಂತ್.

Anonymous December 13, 2010 at 9:22 PM  

very beautifulllllllllllll..........

Busy Bee December 14, 2010 at 4:12 AM  

Very Beautifullllll.....

Anonymous June 20, 2011 at 7:12 AM  

Excellent, superb...!!!

I liked the following lines a lot:
ತ್ಯಜಿಸಿ ಹೋದರೂ ನೀನು ನನ್ನವನೆ ಎನುವ ಮನ
ಅರ್ಥ ಮಾಡಿಸುವ ಪರಿ ತಿಳಿಯದಲ್ಲ

- Manju(manjinahanigalu.wordpress.com)

Sushilkumar February 20, 2012 at 11:06 AM  

Awesome..... really touching inside heart....

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com