ಓ ಮನಸೇ, ನೀನೇಕೆ ಹೀಗೆ...?

ಹಲವು ಬಣ್ಣಗಳ ಹಲವು ಭಾವಗಳ ಹಲವು ರಾಗಗಳ ಹಲವು ನೋವುಗಳ ಮೂಲ ಈ ಮನಸು...

ಯಂಡಮೂರಿ! ನಿಮ್ಮ ಬರಹಗಳು ನನ್ನೊಳಗಿವೆ..

ನಾನು ಚಿಕ್ಕವಳಿದ್ದಾಗ ಕಥೆ ಕಾದಂಬರಿ ಓದಲು ಶುರು ಮಾಡುವ ಸಮಯಕ್ಕೆ ನನ್ನ ಕೈಗೆ ಸಿಕ್ಕಿದ್ದು ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಗಳು. ನನ್ನ ತಂದೆಗೆ ಯಂಡಮೂರಿಯವರ ಬರಹಗಳು ಇಷ್ಟವಾಗಿದ್ದ ಕಾರಣ ಮನೆಯಲ್ಲಿ ಯಂಡಮೂರಿಯವರ ಸಾಕಷ್ಟು ಪುಸ್ತಕಗಳಿದ್ದವು. ಅವರ ಬರಹಗಳನ್ನು ಓದುತ್ತಾ ಓದುತ್ತಾ ಅದೆಷ್ಟು ಅವರ ಅಭಿಮಾನಿಯಾದೇನೆಂದರೆ ಸ್ವಲ್ಪ ಸೂಕ್ಷ್ಮ ಮನಸ್ಸಿನವಳಾಗಿದ್ದ ನಾನು,  ನನಗೆ ಮನಸ್ಸಿಗೆ ಕಷ್ಟವೆನಿಸಿದಾಗೆಲ್ಲಾ ಓಡಿ ಹೋಗಿ ಹಿಡಿದುಕೊಳ್ಳುತ್ತಿದ್ದುದು ಯಂಡಮೂರಿಯವರ ಕೆಲವು ಆಯ್ದ ಪುಸ್ತಕಗಳನ್ನಾಗಿತ್ತು. ಅವನ್ನು ಓದಿದೊಡನೆಯೇ ಮನಸ್ಸಿಗೆ ಎಷ್ಟು ಸಮಾಧಾನ ಸಿಗುತ್ತಿತ್ತೆಂದರೆ .....
ಮನಸಿಗೆ ತುಂಬಾ ನೋವಾದಾಗ ಇದು ಸಹಜ ಮನಸ್ಸಿಗೆ ನೋವು ನಲಿವು ಎರಡೂ ಇರಬೇಕು ಎಂದು ಮನಸ್ಸನ್ನು ಘನವಾಗಿಸಿದವರು ಯಂಡಮೂರಿ, ಸಂಬಂಧಗಳೇ ಇಷ್ಟು ಅನಿಸಿದಾಗ ನನ್ನಂತೆ ಸುತ್ತಲಿರುವವರೆಲ್ಲರೂ ಮನುಷ್ಯರೇ ಎಂದು ಜ್ನಾಪಿಸಿಕೊಟ್ಟಿದ್ದು ಅವರು, ನಾನೇನೂ ಮಾಡಲಾರೆ ನನ್ನಿಂದೇನೂ ಸಾಧ್ಯವಿಲ್ಲ ಎಂದು ಕುಸಿದಾಗ ಆತ್ಮವಿಶ್ವಾಸ ತುಂಬುತ್ತಿದ್ದುದು ಅವರು, ಸುತ್ತಲಿರುವವರ ಮೇಲೆ ಸಿಟ್ಟುಬಂದಾಗ ನಿನ್ನಲ್ಲೂ ಕೂಡ ತಪ್ಪಿರಬಹುದು ಕುಳಿತು ಯೋಚಿಸು ಎಂದು ಸ್ವವಿಮರ್ಶೆಗೆ ದೂಡಿದ್ದು ಅವರು, ಕೊಂಕು ಮಾತುಗಳಿಗೆ ಮನಸ್ಸು ಮುದುಡಿದಾಗ ಇದೂ ಕೂಡ ಜಗದ, ಜೀವನದ ಒಂದು ಭಾಗ ಎಂಬ ವೈರಾಗ್ಯ ರಸವನ್ನು ಕುಡಿಸಿದ್ದು ಅವರು, ಭಾನಲ್ಲಿ ಹಾರುವ ಆಸೆ ಆದಾಗ ಮನಸಿಗೆ ರೆಕ್ಕೆ ಕಟ್ಟಿಕೊಟ್ಟವರೂ ಅವರೇ, ಮೊದಲ ಪ್ರೇಮದ ಅಮಲಿಂತೆ ಅವರ ಬರಹಗಳು,

ಧನ್ಯವಾದ ಎಂಬುದು ಬಲು ಚಿಕ್ಕ ಪದ..!!

ಹೀಗೊಂದು ಅರ್ಧ ಬರೆದಿಟ್ಟ ವಂದನಾರ್ಪಣೆ..:)

3 comments:

prashasti December 2, 2013 at 9:47 AM  

ವಂದನಾರ್ಪಣೆ.. ಯಾಕೋ ಇನ್ನೂ ಇದೆ ಅನ್ನೋ ತರದಲ್ಲೇ ಮುಗಿದುಹೋಯ್ತು :-(

Umashankara Bidarakote Sannegowda July 6, 2014 at 6:45 PM  

ನಿಮ್ಮ ಬ್ಲಾಗಿಗೆ ಭೆೇಟಿ ನೀಡಿದ್ದು ಆಕಸ್ಮಿಕವಾದರುೂ ಕೆಲ ಕವನಗಳಂತು ಕಾಡುವ ಹಾಗಿವೆ..... ದುಯಮಾಡಿ ಬರವಣಿಗೆ ಮುಂದುವರಿಸಿ ಆಗಿಂದಾಗ್ಗೆ ಬರ್ತಿರ್ತೀನಿ....
ನನ್ನದೂ ಒಂದು ಬ್ಲಾಗ್ ಇದೆ WWW.bidarakote.blogspot.com
ಸಾಧ್ಯವಾದರೆ ಭೆೇಟಿ ನೀಡಿ
.......ಉಮಾಶಂಕರ್

Sandhya rao February 5, 2017 at 8:49 PM  

Chandada baraha Chetana
Naanoo kooda yandamoori abhimaani..

Post a Comment

ಬನ್ನಿ ಭಾವಗಳ ತವರಿಗೆ

ಬನ್ನಿ ಶುದ್ಧ ಭಾವಗಳೆ, ಶುಭ್ರ ಭಾವಗಳೆ ..
ದೂರ ಸರಿಯಿರಿ ದುಷ್ಟ ಭಾವಗಳೆ, ಭ್ರಷ್ಟ ಭಾವಗಳೆ...

Followers

WHO'S AMONG US

stat counter
elogicwebsolutions.com